ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ
ಸಹಕಾರ
image
ESTD : 1958
ತತ್ವಗಳು
ಸ್ವಯಂಪ್ರೇರಿತ ಮತ್ತು ಮುಕ್ತ ಸದಸ್ಯತ್ವ
ಪ್ರಜಾಸತ್ತಾತ್ಮಕ ಸದಸ್ಯ ಹತೋಟಿ
ಆರ್ಥಿಕ ಚಟುವಟಿಕೆಯಲ್ಲಿ ಸದಸ್ಯರ ಪಾಲನೆ
ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ
ಶಿಕ್ಷಣ, ತರಬೇತಿ ಮತ್ತು ಪ್ರಚಾರ
ಸಹಕಾರ ಸಂಸ್ಥೆಗಳ ನಡುವೆ ಸಹಕಾರ
ಸಾಮಾಜಿಕ ಕಳಕಳಿ
founder_img
flag_img

ಸಂಸ್ಥೆಯ 63 ರ ನಡಿಗೆ...

ಪ್ರಾರಂಭದಲ್ಲಿ ಕರ್ನಾಟಕ ಕೈಗಾರಿಕಾ ಸಹಕಾರಿ ಬ್ಯಾಂಕಿನಿಂದ ಆರ್ಥಿಕ ಸಹಾಯ ಪಡೆದು ಗುಡಿಕೈಗಾರಿಕೆ ಮತ್ತು ಕುಶಲಕರ್ಮಿ ಸದಸ್ಯರಿಗೆ ಸಾಲವನ್ನು ಸಂಘವು ಒದಗಿಸುತ್ತಿತ್ತು. ಈ ವ್ಯವಹಾರದಲ್ಲಿ ಸಂಘಕ್ಕೆ ಅಲ್ಪ ಪ್ರಮಾಣದ ಬಡ್ಡಿ ರಿಯಾಯಿತಿ ಲಭ್ಯ ಆಗುತ್ತಿದ್ದು, ಸಂಘವು ಉತ್ತಮ ರೀತಿಯಿಂದ ಕಾರ್ಯ ಸಾಧನೆ ಮಾಡಲು ಸಾಧ್ಯವಾಗದೆ ಇರುವುದರಿಂದ 1979ರ ತನಕ ಸಂಘದ ವ್ಯವಹಾರದಲ್ಲಿ ಯಾವುದೇ ರೀತಿಯ ಪ್ರಗತಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದ ಸಂಘವನ್ನು ಪುನಶ್ಚೇತನ ನೀಡುವ ಉದ್ದೇಶದಿಂದ ಸಂಘದ ಆಗಿನ ಆಡಳಿತ ಮಂಡಳಿಯು ಶ್ರೀ ಟಿ. ಶಂಭು ಶೆಟ್ಟಿಯವರ ಮಾರ್ಗದರ್ಶನದಲ್ಲಿ ದಿ| ಡಾ.ಎಸ್.ರಮಾನಂದ ಭಟ್‌ರವರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿಯಾಗಿ ಶ್ರೀ ಬಿ. ಭಾಸ್ಕರ್ ಕಾಮತ್‌ರವರನ್ನು ನೇಮಕ ಮಾಡಿ ಹೊಸ ಹುಮ್ಮಸ್ಸಿನಿಂದ ಸಂಘದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿ ಕೆಲಸ ಮಾಡಲು ಪ್ರಾರಂಭಿಸಿದ್ದು, ಸಂಘದ ಸದಸ್ಯರ ಸಹಕಾರ, ಸಂಘವು ಪ್ರಾರಂಭವಾದಾಗಿನಿಂದ ಸೇವೆ ಸಲ್ಲಿಸಿದ ಸಂಘದ ಆಡಳಿತ ಮಂಡಳಿ ಸದಸ್ಯರ, ಅಧ್ಯಕ್ಷರ, ಉಪಾಧ್ಯಕ್ಷರ, ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿಯವರ ಮತ್ತು ಸಿಬ್ಬಂದಿಗಳ ನಿಸ್ವಾರ್ಥ ಸೇವೆಯೇ ಸಂಘವು ಈ ಬೆಳೆದು ಬರಲು ಕಾರಣವಾಗಿರುತ್ತದೆ.

ಆಗಿನ ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಟ್ಟ ಉಡುಪಿ ತಾಲೂಕು ಕಾರ್ಯವ್ಯಾಪ್ತಿಗೆ ಸೀಮಿತವಾಗಿಟ್ಟು ರೂರಲ್ ಇಂಡಸ್ಟ್ರೀಸ್ ಬೆಂಗಳೂರು ಇದರ ನಿರ್ದೇಶಕರು ದಿನಾಂಕ: 07-02-1958ರಲ್ಲಿ ನೋಂದಣಿ ಸಂಖ್ಯೆ: DRI 13, ರಲ್ಲಿ ನೋಂದಣಿ ಮಾಡಿರುತ್ತಾರೆ. ಕಿರುಕೈಗಾರಿಕೆಗಳಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಈ ಸಂಘವು ಸ್ಥಾಪನೆಯಾಗಿದೆ.

ಸಂಘದ ಪ್ರಥಮ ಸರ್ವ ಸದಸ್ಯರ ಮಹಾಸಭೆಯು ಹಿಂದಿನ ಉಡುಪಿ ಸಹಕಾರಿ ಹಾಲು ಸರಬರಾಜು ಸಂಘ ಉಡುಪಿ ಇದರ ಆವರಣದಲ್ಲಿ ದಿನಾಂಕ 28-02-1958 ರಂದು ಜರಗಿದ್ದು ಆ ದಿನದ ಸಭೆಯಲ್ಲಿ 31 ಜನ ಸದಸ್ಯರು ಹಾಜರಾಗಿದ್ದು, ಮಾಜಿ ವಿಧಾನ ಸಭಾ ಸದಸ್ಯರು ದಿ| ಯು.ಎಸ್.ನಾಯಕ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದರು.

2016 ರಿಂದ ಶ್ರೀ ರಾಜೇಶ್ ಹೆಗ್ಡೆ ಇವರು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ 13 ಜನ ಸದಸ್ಯರು ಸದರಿ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಧಾನ ಆಡಳಿತ ಕಚೇರಿ 9 ಶಾಖಾ ಕಚೇರಿಗಳು ಮತ್ತು ಮುದ್ರಣ ಘಟಕ ಸೇರಿದಂತೆ ಒಟ್ಟು 10 ಕೇಂದ್ರಗಳಲ್ಲಿ 54 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ನೌಕರರು ಅವರವರಿಗೆ ವಹಿಸಿಕೊಟ್ಟ ಜವಾಬ್ದಾರಿಗನುಗುಣವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದು ಕೆಲಸವು ತೃಪ್ತಿಕರವಾಗಿರುತ್ತದೆ. ಸಂಘದ ಸಿಬ್ಬಂದಿಗಳ ಜೊತೆಯಲ್ಲಿ ದೈನಿಕ ಠೇವಣಿ ಏಜೆಂಟರನ್ನು ಮತ್ತು ಆಭರಣ ಪರಿವೀಕ್ಷಕರನ್ನು ನೆನಪಿಸಿಕೊಳ್ಳುವುದು ಅಗತ್ಯವಿದ್ದು ಒಟ್ಟು 33 ಜನ ದೈನಿಕ ಠೇವಣಿ ಏಜೆಂಟರು ಮತ್ತು 9 ಜನ ಆಭರಣ ಪರಿವೀಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಘದ ಸಿಬ್ಬಂದಿಗಳಿಂದ, ಪಿಗ್ಮಿ ಏಜೆಂಟರಿಂದ ಹಾಗೂ ಸರಾಫರಿಂದ ಮುಂದಿನ ವರ್ಷಗಳಲ್ಲಿ ಉತ್ತಮ, ಪ್ರಾಮಾಣಿಕ ಹಾಗೂ ಸಂಘದ ಬೆಳವಣಿಗೆಗೆ ಪೂರಕವಾದ ಸೇವೆಯನ್ನು ನಿರೀಕ್ಷಿಸಲಾಗಿದೆ. ಸಂಘವು 1988 ರಿಂದ ಸತತವಾಗಿ ಲಾಭಗಳಿಸುತ್ತಾ ಬಂದಿರುತ್ತದೆ. ಸಂಘವು ಪ್ರತೀ ವರ್ಷ ಸದಸ್ಯರಿಗೆ ಶೇ.12 ರಿಂದ 18 ರ ತನಕ ಪಾಲುಮುನಾಫೆಯನ್ನು ನೀಡಿರುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಲಾಭಗಳಿಸಿ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಶೀಘ್ರ, ಉತ್ತಮ ಸೇವೆ ಸಲ್ಲಿಸುವ ಹಾಗೂ ಪಾಲು ಮುನಾಫೆಯನ್ನು ಹಂಚುವ ಮಹಾತ್ವಾಕಾಂಕ್ಷೆ ಹೊಂದಿರುತ್ತದೆ.